೨೦೧೭ ರಲ್ಲಿ ಉತ್ತರ ಪ್ರದೇಶದಲ್ಲಿ 17ನೆ ವಿಧಾಸಭಾ ಚುನಾವಣೆ ಫೆಬ್ರವರಿ 11 ರಿಂದ ಮಾರ್ಚ್ 8 ರ ವರೆಗೆ 7 ಹಂತಗಳಲ್ಲಿ ನಡೆಯಿತು. 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ಕೂಡ ವಿಧಾನಸಭಾ ಚುನಾವಣೆ ನಡೆಯಿತು. == ಯು ಪಿ ರಾಜ್ಯದ ವಿಧಾನಸಭೆ ಚುನಾವಣೆ 2017 == ಚುನಾವಣೆ ಮುನ್ನೋಟ:3/1/2017 ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ (ಒಟ್ಟಾರೆ ಎಸ್ಪಿ) ಇತ್ತೀಚಿನ ಎಬಿಪಿ ನ್ಯೂಸ್-ಲೋಕನೀತಿಯ ( ) ಚುನಾವಣೆ ಮುನ್ನೋಟ ಪ್ರಕಾರ: === ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ === 16 , 2017,ಸೋಮವಾರ. ಸಮಾಜವಾದಿ ಪಕ್ಷ ಅಖಿಲೇಶ್ ಬಣ ಮತ್ತು ಮುಲಾಯಂ ಬಣ ಎಂದು ಹೋಳಾದ ನಂತರ ಚುನಾವಣಾ ಚಿಹ್ನೆಗಾಗಿ ಅಪ್ಪ ಮತ್ತು ಮಗನ ನಡುವೆ ಹೋರಾಟ ನಡೆದು ಬರುತ್ತಿತ್ತು. ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಎರಡು ಬಣಗಳ ನಡುವೆ ಸೈಕಲ್‌ ಚಿಹ್ನೆಗಾಗಿ ನಡೆದಿರುವ ಸಂಘರ್ಷದ ಬಗ್ಗೆ ಚುನಾವಣಾ ಆಯೋಗ ಸೋಮವಾರ ತೀರ್ಪು ನೀಡಿದ್ದು, ಅಖಿಲೇಶ್ ಯಾದವ್‍ ಬಣಕ್ಕೆ 'ಸೈಕಲ್' ಚಿಹ್ನೆ ಸಿಕ್ಕಿದೆ.ಈ ತೀರ್ಪಿನಿಂದಾಗಿ 25 ವರ್ಷಗಳ ಹಿಂದೆ ಪಕ್ಷ ಸ್ಥಾಪನೆ ಮಾಡಿದ್ದ 77ರ ಹರೆಯದ ಮುಲಾಯಂ ಸಿಂಗ್ ಅವರಿಗೆ ಮುಖಭಂಗವಾಗಿದೆ. === ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ === ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಖಚಿತವಾಗಿದೆ. ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬಿಡುಗಡೆ ಮಾಡಿದ್ದು, ಬಿಜೆಪಿ ‘ಅಚ್ಚೇ ದಿನ’ ತರುವುದಾಗಿ ನೀಡಿದ್ದ ಭರವಸೆಗಳು ಈಡೇರಿರದ ಕುರಿತು ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ನಡೆಯುತ್ತಿದ್ದ ಚರ್ಚೆ ಯಶಸ್ವಿಯಾಗಿದೆ. ಒಟ್ಟು 403 ಸ್ಥಾನಗಳ ಪೈಕಿ ಕಾಂಗ್ರೆಸ್‌ 105 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಮಾಜವಾದಿ ಪಕ್ಷ 298 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. == ಎಬಿಪಿ ಸಮೀಕ್ಷೆ == 29 , 2017;ಒನ್ಇಂಡಿಯಾ ಸುದ್ದಿ; === ಬಿಜೆಪಿಯ ಚುನಾವಣೆ ಭರವಸೆಗಳು === 29 , 2017 == 7 ಹಂತದಲ್ಲಿ ಮತದಾನ == ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ. ಒಟ್ಟು 403 ಅಸೆಂಬ್ಲಿ ಕ್ಷೇತ್ರ ಎರಡನೇ ಹಂತ : ಫೆಬ್ರವರಿ 15 ಮೂರನೇ ಹಂತ : ಫೆಬ್ರವರಿ 19 ನಾಲ್ಕನೇ ಹಂತ: ಫೆಬ್ರವರಿ 23 ಐದನೇ ಹಂತ: ಫೆಬ್ರವರಿ 27 ಆರನೇ ಹಂತ : ಮಾರ್ಚ್ 04 ಏಳನೇ ಹಂತ: ಮಾರ್ಚ್ 08 ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9) ಮಾರ್ಚ್ 11 ರಂದು ಶನಿವಾರ ಫಲಿತಾಂಶ ಪ್ರಕಟ. == ಶೇ.ಮತದಾನ == ಮೊದಲ ಹಂತ: ಫೆಬ್ರವರಿ 11 -73 ಸ್ಥಾನಗಳಿಗೆ ಮತದಾನ ನಡೆದಿದೆ,-ಶೇಕಡ 64 ಮತದಾನ. ಎರಡೇ ಹಂತ; ಫೆ.15, 67 ಕ್ಷೇತ್ರಗಳಲ್ಲಿ ಮತದಾನ;ಶೇಕಡ 65 ಮತದಾನ. ಮೂರನೇ ಹಂತ: 20, 2017; 12 ಜಿಲ್ಲೆಗಳಲ್ಲಿ ಹರಡಿರುವ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ;25,603 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ಇಲ್ಲಿದ್ದಾರೆ. ಈ 3 ನೇ ಹಂತದ ಮತದಾನದಲ್ಲಿ 2.41 ಕೋಟಿ ಜನರು, 1.10 ಕೋಟಿ ಮಹಿಳೆಯರು ಮತ್ತು 'ಮೂರನೇ ಲಿಂಗ' ವರ್ಗಕ್ಕೆ ಸೇರಿರುವ 1,026 ಜನರು ಸೇರಿದಂತೆ ಮತದಾನಕ್ಕೆ ಅರ್ಹರಾಗಿರುತ್ತಾರೆ. ಫೆಬ್ರ, 23, 2017 ರಂದು ನಾಲ್ಕನೇ ಹಂತದಲ್ಲಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸಂಜೆ 5 ರವರೆಗೆ ಶೇ. 61 ದಾಖಲಿಸಲಾಗಿದೆ; ಮತದಾನದ 63ದಾಟಲು ನಿರೀಕ್ಷಿಸಬಹುದು. (ಚುನಾವಣಾ ಆಯೋಗ) ಫೆಬ್ರ. 27, 2017; ಐದನೇ ಹಂತದಲ್ಲಿ 5ಗಂ.ತನಕ ಮತದಾನ ಶೇ.57.36, ದಾಖಲಾಗಿದೆ; ಮತ್ತು ಹಲವಾರು ಮತದಾರರು ತಮ್ಮ ಮತದಾನಕ್ಕೆ ಸಾಲುಗಳನ್ನು ಕಾಯುತ್ತಿದ್ದರು; ಶೇ.೫೭.೫ ಕ್ಕೆ ಹೋಗುವ ಸಾಧ್ಯತೆಯಿದೆ. 4, 2017,ರಂದು, ಉತ್ತರ ಪ್ರದೇಶದಲ್ಲಿ ಅಂದಾಜು ಶೇಕಡಾ 57,03 ರಷ್ಟು ಮತದಾರರು ಈ ಹಂತದಲ್ಲಿ ತಮ್ಮ ಮತದಾನ ಮಾಡಿದರು. 8 , 2017; ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬುಧವಾರ ಮುಕ್ತಾಯಗೊಂಡಿದ್ದು, ಶೇ.60.03 ಮತದಾನವಾಗಿದೆ. == ಫಲಿತಾಂಶ == ಸ್ಥಾನಗಳು: 403 403 ಸದಸ್ಯರಿರುವಉತ್ತರಪ್ರದೇಶ ವಿಧಾನಸಭೆಯಲ್ಲಿ 312 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. 70 ಸದಸ್ಯರಿರುವ ಉತ್ತರಾಖಂಡ್‍ ವಿಧಾನಸಭೆಯಲ್ಲಿ ಬಿಜೆಪಿ 47 ಸೀಟು ಗೆದ್ದುಕೊಂಡಿದೆ. 105 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ ಏಳು ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಹಾಗೂ ಅಮೇಠಿಗಳಲ್ಲೂ ಭಾರಿ ಸೋಲು ಅನುಭವಿಸಿದೆ. ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷ :(ಎನ್ಡಿಎ)ಸ್ಪರ್ಧೆ 7; ಗೆಲುವು: 4ಸ್ಥಾನ ಬಿಜೆಪಿಯ ಮಿತ್ರ, ಪ್ರಾದೇಶಿಕ ಪಕ್ಷ ಅಪ್ನಾ ದಳ:(ಎನ್ಡಿಎ): 9 ಸ್ಥಾನಗಳನ್ನು ಗೆದ್ದಿದೆ. ==== ಮತಗಳಿಕೆ ==== ಬಿಜೆಪಿ :39.78% =348793೦೦ ಬಿಎಸ್.ಪಿ :22.2% = 192643೦೦ ಎಸ್.ಪಿ :21.8% =18905744 ಕಾಂ. : 6.2% =5416324 ಪಕ್ಷೇತರ :2.6% =ಓಟು:22,28,213 ಆರ್,ಎಲ್.ಡಿ:1.8% = 15,40,620 ಎಡಿಎಎಲ್:1.0% = 8,51,336 ಎಸ್.ಬಿ.ಎಸ್.ಪಿ0.7% = 6,07,911 ಎನ್,ಐ,ಎನ್,ಎಸ್,ಎಚ್,ಎಡಿ = 0.6%53.... ಪಿಇಸಿಪಿ:0.3% + 2,27,998 === ಜಾತಿ ಲಕ್ಕಾಚಾರ === == ಫಲಿತಾಂಶದ ವಿವರ == === ಗೆಲುವುಗಳ ಇತಿಹಾಸ === 1952ರಲ್ಲಿ ಒಟ್ಟು 430ರ ಪೈಕಿ ಕಾಂಗ್ರೆಸ್ 388 ಸೀಟುಗಳನ್ನು ಗೆದ್ದಿತ್ತು. 1977ರಲ್ಲಿ ತುರ್ತುಪರಿಸ್ಥಿತಿಯ ನಂತರ ಜನತಾಪಾರ್ಟಿಗೆ 352 ಸೀಟುಗಳು ದೊರೆತಿದ್ದವು. 1980ರಲ್ಲಿ ಕಾಂಗ್ರೆಸ್ 309 ಸೀಟುಗಳನ್ನು ಗೆದ್ದಿತ್ತು. ಉತ್ತರಪ್ರದೇಶ ವಿಭಜನೆ ಬಳಿಕ 403 ಸೀಟುಗಳ ಪೈಕಿ ಬಿಜೆಪಿ 312 ? ಸೀಟುಗಳ ಗೆಲುವಿನ ವಿಕ್ರಮ ಸಾಧಿಸಿದೆ. ರಾಮಜನ್ಮಭೂಮಿ ಆಂದೋಲನದ ಫಲವಾಗಿ 1991ರಲ್ಲಿ 221 ಸೀಟುಗಳನ್ನು ಗಳಿಸಿದ್ದೇ ಉತ್ತರಪ್ರದೇಶದಲ್ಲಿ ಈವರೆಗೆ ಬಿಜೆಪಿ ಗಳಿಸಿದ್ದ ದೊಡ್ಡ ಗೆಲುವು. ಆನಂತರದ ಇಲ್ಲಿಯವರೆಗಿನ ಪಯಣ ಇಳಿಜಾರಿನ ಹಾದಿಯದು. 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಹಾಗೂ 2012ರಲ್ಲಿ 47. ಇದೀಗ ಮೋದಿ ನೇತೃತ್ವದಲ್ಲಿ ದಿಗ್ವಿಜಯ ಕಂಡಿದೆ. == 2017 ರ ಬೆಜೆಪಿ ಗೆಲುವಿನ ವಿಶ್ಲೇಷಣೆ == ಹಿಂದೂ ಹಬ್ಬಕ್ಕೆ ಕಡಿಮೆ ಮತ್ತು ಮುಸ್ಲಿಂ ಹಬ್ಬಕ್ಕೆ ಹೆಚ್ಚು ವಿದ್ಯುಚ್ಛಕ್ತಿ ಸರಬರಾಜು, ಮುಸ್ಲಿಂ ಮಕ್ಕಳಿಗೇ ಹೆಚ್ಚು ಲ್ಯಾಪ್‌ಟಾಪ್ ಮತ್ತಿತರೆ ಕೋಮು ಧ್ರುವೀಕರಣದ ಆರೋಪಗಳಿಗೆ ಪುರಾವೆ ಇಲ್ಲ. ನೋಟು ರದ್ದತಿ ಕ್ರಮವೂ ಅಷ್ಟೆ. ಕಾಳಧನ ವಾಪಸು ಬಂದಿಲ್ಲವೆಂದು ಅಂಕಿ ಅಂಶಗಳು ಬೇರೊಂದು ಕತೆಯನ್ನೇ ಹೇಳುತ್ತವೆ. ಆದರೆ ತಾವು ನಂಬಿಕೆಯಿಟ್ಟ ನಾಯಕ ಹೇಳುವುದೇ ಅಂತಿಮ ಸತ್ಯ ಎಂಬಷ್ಟು ಆಳದ ವಿಶ್ವಾಸವನ್ನು ಜನಸಮೂಹದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಮೂಡಿಸಿರುವ ಮೋದಿಯವರ ಸಾಧನೆ ಯಾವ ಪವಾಡಕ್ಕೂ ಕಡಿಮೆಯದಲ್ಲ. ==== ಬಿಹಾರದ ಮೈತ್ರಿ ನೀತಿ ==== 2015ರ ಕಡೆಯ ಭಾಗದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡಲಿದ್ದಾರೆ ನಿತೀಶ್- ಲಾಲೂ ಎಂದು ಹೆದರಿಸಿದ್ದರು ಮೋದಿ. ಬಿಜೆಪಿಯನ್ನು ಗೆಲ್ಲಿಸಿದರೆ ಬಿಹಾರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಆಮಿಷವನ್ನೂ ಒಡ್ಡಲಾಗಿತ್ತು. ಆದರೂ ಬಿಹಾರ ಮೋದಿಯವರಿಗೆ ಒಲಿಯಲಿಲ್ಲ. ಯಾದವೇತರ ಹಿಂದುಳಿದ ವರ್ಗಗಳು, ದಲಿತರು ಮತ್ತು ಮಹಾದಲಿತ ಜನವರ್ಗಗಳನ್ನು ನಿತೀಶ್ ಕುಮಾರ್ ಅದಾಗಲೇ ಸಂಯುಕ್ತ ಜನತಾದಳದ ತೆಕ್ಕೆಗೆ ತೆಗೆದುಕೊಂಡು ಆಗಿತ್ತು. ಇಂತಹ ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ್ದರು ಲಾಲೂ. ಮುಸಲ್ಮಾನರನ್ನೂ ಸೆಳೆದು ಯಾದವ ಮತ ಭಂಡಾರಕ್ಕೆ ಜೋಡಿಸುವ ಶಕ್ತಿ ಜೋಡಿಗೆ ಇತ್ತು. ಜೊತೆ ಸೇರಿತ್ತು ಕಾಂಗ್ರೆಸ್ ಪಕ್ಷ. ಪರಿಣಾಮವಾಗಿ ಎದ್ದು ನಿಂತ ಮಹಾಮೈತ್ರಿ ಕೂಟ ಮೋದಿ ಹಾದಿಯ ಅಡ್ಡಗಲ್ಲಾಯಿತು. 273 ಸ್ಥಾನಗಳ ಪೈಕಿ ಮಹಾಮೈತ್ರಿ ಕೂಟ 179ನ್ನು ಗೆದ್ದುಕೊಂಡಿತ್ತು. ==== ಉತ್ತರಪ್ರದೇಶದಲ್ಲೂ ಮಹಾಮೈತ್ರಿಕೂಟ ಇದ್ದಿದ್ದರೆ ==== ಉತ್ತರಪ್ರದೇಶದಲ್ಲೂ ಇಂತಹುದೇ ಮಹಾಮೈತ್ರಿಕೂಟ ತಲೆ ಎತ್ತಿದ್ದರೆ ಚುನಾವಣಾ ಫಲಿತಾಂಶಗಳು ತಿರುವು ಮುರುವಾಗುತ್ತಿದ್ದವು. ಸಮಾಜವಾದಿ ಪಾರ್ಟಿ(ಎಸ್.ಪಿ)- ಕಾಂಗ್ರೆಸ್ ಜೊತೆಗೆ ಬಹುಜನಸಮಾಜ ಪಾರ್ಟಿ (ಬಿ.ಎಸ್.ಪಿ.) ಸೇರಿ ಚುನಾವಣೆಗೆ ಮುನ್ನವೇ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿದ್ದರೆ ದೊಡ್ಡ ಗೆಲುವಿನತ್ತ ಸಾಗುತ್ತಿದ್ದವು ಎಂಬ ಸಂಗತಿಯನ್ನು ಫಲಿತಾಂಶ ವಿಶ್ಲೇಷಣೆ ನಿಚ್ಚಳವಾಗಿ ಸೂಚಿಸುತ್ತದೆ. 203 ಸೀಟುಗಳಲ್ಲಿ ಎಸ್.ಪಿ.-ಕಾಂಗ್ರೆಸ್ ಕೂಟ ಎರಡನೆಯ ಸ್ಥಾನದಲ್ಲಿ, 116ರಲ್ಲಿ ಬಿ.ಎಸ್.ಪಿ.ಯದು ಎರಡನೆಯ ಸ್ಥಾನ. ಈ ಎರಡೂ ಪಕ್ಷಗಳು:ಎಸ್.ಪಿ.-ಕಾಂಗ್ರೆಸ್ ಕೂಟ + ಬಿ.ಎಸ್.ಪಿ.ಗಳಿಸಿದ ಮತಗಳು; 198 ಕ್ಷೇತ್ರಗಳಲ್ಲಿ ಬಿಜೆಪಿಯ ವಿಜಯೀ ಅಭ್ಯರ್ಥಿ ಗಳಿಸಿದ ಮತಗಳ ಪ್ರಮಾಣವನ್ನು ಮೀರುತ್ತದೆ. 324 ಸ್ಥಾನ ಗೆದ್ದಿರುವ ಬಿಜೆಪಿ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 39.7. ಎರಡನೆಯ ಸ್ಥಾನದಲ್ಲಿರುವ ಬಿ.ಎಸ್.ಪಿ. ಪಕ್ಷ ಗಳಿಸಿದ ಮತಗಳು ಶೇ 22.2ರಷ್ಟು. ಎಸ್.ಪಿ. ಗಳಿಸಿದ ಮತಗಳು ಶೇ 21.8 ರಷ್ಟು ಕಾಂಗ್ರೆಸ್ಸಿನ ಗಳಿಕೆ ಶೇ 6.2. ರಷ್ಟು; ಇತರರು 10.1% () 324 ಸ್ಥಾನ ಗೆದ್ದಿರುವ ಬಿಜೆಪಿ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 39.7. <> ಇತರ ಮೂರು ಪಕ್ಷಗಳ ಒಟ್ಟು ಮತ ಶೇಕಡಾವಾರು ಪ್ರಮಾಣ =22.2 + 21.8 +6.2.= 50.2 ವಿರೋಧ ಪಕ್ಷಗಳು ಈಗ ಸೋತಿರುವ 198 ಪ್ರತಿ ಕ್ಷೇತ್ರಗಳಲ್ಲಿ ಇತರ ಮೂರು ಪಕ್ಷಗಳ ಒಟ್ಟು ಮತ ಬಿಜೆಪಿ ಗಳಿಸಿದ ಮತಗಳಿಗಿಂತ ಹೆಚ್ಚು = 198 + ಎಸ್.ಪಿ & ಕಾ 54 + ಬಿಎಸ್.ಪಿ 19 = 271 ಸ್ಥಾನ ಗೆಲ್ಲಬಹುದಿತ್ತು ಎಂಬ ಅಂದಾಜು; ಅದರಲ್ಲಿ 20 ಕಡಿಮೆ ಬಂದರೂ 251 ಕ್ಕೆ ಕಡಿಮೆ ಇರುತ್ತಿರಲಿಲ್ಲ.(ಬಹುಮತಕ್ಕೆ 203 ಸಾಕು). ನಿತೀಶರ ಮುಂದಾಲೋಚನೆಯನ್ನು ಅನುಸರಿಸದೆ, ಮೋದಿಯವರ ಮೋಡಿಯನ್ನು ಅರ್ಥ ಮಾಡಿಕೊಳ್ಳದೇ ಅವಕಾಶ ತಪ್ಪಸಿಕೊಂಡರು. == ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ == 18 , 2017; ಬಿಜೆಪಿ ಭಾರಿ ಬಹುಮತ ಪಡೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ನಡೆಯಲಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ನಿಚ್ಚಳವಾಗಿದೆ ಎಂದು ಮೊದಲುಸುದ್ದಿಯಾಗಿತ್ತು. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ಸಂಜೆಗೆ ನಿಗದಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಸಿನ್ಹಾ ಅವರು ‘ನಾನು ಯಾವ ಹುದ್ದೆಯ ಸ್ಪರ್ಧೆಯಲ್ಲಿಯೂ ಇಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ. ಆರೆಸ್ಸೆಸ್‍ನ 'ಕೆಂಪು ಧ್ವಜ' ಯುಪಿಯ ಮುಖ್ಯಮಂತ್ರಿ ಆಗಬೇಕೆಂಬ ಕೇಂದ್ರದ ಟೆಲಿಕಾಂ ಸಚಿವ ಮನೋಜ್ ಸಿನ್ಹಾರ ಅವಕಾಶಗಳನ್ನು ತಡೆಯಿತು ಎಂಬ ಅಭಿಪ್ರಾಯವಿದೆ. 18 , 2017 ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮತ್ತು ಲಖನೌ ಮೇಯರ್‌ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ. ಲಖನೌದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಗೋರಖ್‌ಪುರದ ಪ್ರಸಿದ್ಧ ಗೋರಕ್ಷನಾಥ ಪೀಠದ ‘ಮಹಂತ’ (ಧಾರ್ಮಿಕ ಮುಖ್ಯಸ್ಥ) ಯೋಗಿ ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. == ಯೋಗಿ ಆದಿತ್ಯನಾಥ್‌ 21ನೇ ಮುಖ್ಯಮಂತ್ರಿ == 19 , 2017 ಭಾನುವಾರ ಮಧ್ಯಾಹ್ನ. ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಇದೇ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ, ಬಲ್ಲಮೂಲಗಳ ಪ್ರಕಾರ ಮೌರ್ಯ ಅವರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು. ಸೂರ್ಯ ಪ್ರತಾಪ್ ಸಾಹಿ, ಸುರೇಶ್ ಖನ್ನಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ನೋನ ಸ್ಮೃತಿ ಉಪವನದಲ್ಲಿ. ಆದಿತ್ಯನಾಥ್ ಮತ್ತು ತನ್ನ ಎರಡು ಸಹಯೋಗಿಗಳ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ 43 ಸದಸ್ಯರನ್ನು ಹೊಂದಿದೆ. ಕಾಕತಾಳೀಯವಾಗಿ, ಆದಿತ್ಯನಾಥ್ ಅಥವಾ ಮೌರ್ಯ ಅಥವಾ ಶರ್ಮಾ ಮೂವರೂ (ಹೊಸ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿಗಳು) ಸದನದ ಶಾಸಕರಲ್ಲ. ಕಾಂಗ್ರೆಸ್‍ನ ಮಾಜಿ ನಾಯಕಿ ರೀಟಾ ಬಹುಗುಣ ಜೋಶಿ ಮತ್ತು ಮಾಜಿ ಬಹುಜನ ಸಮಾಜ ಪಕ್ಷದ ನಾಯಕ ಬ್ರಿಜೇಶ್ ಪಾಠಕ್ ಯುಪಿ ಅಸೆಂಬ್ಲಿ ಚುನಾವಣೆಗಳ ಮುಂಚೆ ಪಕ್ಷ ಸೇರಿಕೊಂಡವರು. ಇವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ದಾರಾ ಸಿಂಗ್ ಚೌಹಾಣ್, ಧರಂ ಪಾಲ್ ಸಿಂಗ್, ಸತ್ಯದೇವ್ ಪಚೌರಿ, ರಾಮಪತಿ ಶಾಸ್ತ್ರಿ, ಜೆಪಿ ಸಿಂಗ್, ಓಂ ಪ್ರಕಾಶ್ ರಾಜ್‍ಭರ್, ಲಕ್ಷ್ಮಿ ನಾರಾಯಿನ್ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ, ಮಾಜಿ ಕ್ರಿಕೆಟಿಗ ಮೋಹಸಿನ್ ರಾಜಾ, ನೀಲಕಾಂತ್ ತಿವಾರಿ, ಗಿರೀಶ್ ಚಂದ್ರ ಯಾದವ್ ಮತ್ತು ಬಲದೇವ್ ಔಲಾಖ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 22 ಕ್ಯಾಬಿನೆಟ್ ಸಚಿವರು ಮತ್ತು ಒಂಬತ್ತು ಜನ ರಾಜ್ಯದ (ಸ್ವತಂತ್ರ ಹೊಣೆಗಾರಿಕೆಯ) ಮಂತ್ರಿಗಳಾಗಿದ್ದಾರೆ. == ನೋಡಿ == ವಿಧಾನಸಭೆ ಚುನಾವಣೆಗಳು 2017 ಉತ್ತರಪ್ರದೇಶ ವಿಧಾನಸಭೆ, ಪಂಜಾಬ್ ವಿಧಾನಸಭೆ, ಗೋವಾ ವಿಧಾನಸಭೆ, ಉತ್ತರಾಖಂಡ ವಿಧಾನಸಭೆ ಮತ್ತು ಮಣಿಪುರ ವಿಧಾನಸಭೆ ಉತ್ತರಪ್ರದೇಶ ಸರ್ಕಾರ ೨೦೧೯ರ ಚುನಾವಣೆಯ ಮುನ್ನೋಟ:ಕರ್ನಾಟಕದ ಮೈತ್ರಿ: ನಾಯಕರು ಬಂದಿದ್ದೇಕೆ..?;28 , 2018 2018-05-28 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==